ಐ ಕಲೇ…!!???

ಸಂಜೆ ಮಬ್ಬುಗತ್ತಲಾಗುತ್ತಲೇ ತಳಮಳ ಆರಂಭಗೊಂಡಿತ್ತು. ಇಡೀ ಊರೆಲ್ಲಾ ಹುಡುಕಿದರೂ ಮಲ್ಲಿಯ ಸುಳಿವಿಲ್ಲ. ‘’ಮಲ್ಲಿಯನ್ನು ಹುಡುಕಿ ಹೊಡ್ಕೊಂಡ್‌ ಬರ್ಲಿಲ್ಲಾ ಅಂದ್ರೆ ಮನೆಯೊಳಗೆ ಜಾಗ ಇಲ್ಲ….,’’ ಅಪ್ಪನ ಕಡಕ್‌ ಮಾತು ಹಾಗೂ ಬುಸುಗುಡುವ ವದನದ ನೆನಪಾಗಿ ಮತ್ತಷ್ಟು ಆತಂಕ ಹೆಚ್ಚಾಯ್ತು. ಇಷ್ಟಕ್ಕೆಲ್ಲಾ ನಮ್ಮಣ್ಣನೇ ಕಾರಣ. ಬೇಡಾ ಬೇಡಾ ಅಂದ್ರೂ ಚಂದ್ರೇಗೌಡ ಮತ್ತೆ ಅಶ್ವಥೀ ಜೊತೆ ನನ್ನನ್ನೂ ಸಿನೇಮಾಕ್ಕೆ ಕರೆದುಕೊಂಡು ಹೋಗಿದ್ದ. ಮ್ಯಾಟನೀ ಶೋ ಮುಗಿಸಿ ಮನೆಗೆ...