ಕುರ್ಚಿಆಸೆಗೆ ಕಚ್ಚಾಡದಿರಿ-ಪಕ್ಷವನ್ನು ಬಲಿ ಕೊಡದಿರಿ

ಚಿಕ್ಕಮಗಳೂರು, ನ.೩ – ಕುರ್ಚಿ ಆಸೆಗೆ ಕಚ್ಚಾಡಬೇಡಿ, ಪಕ್ಷ ಬಲಿಕೊಡಬೇಡಿ ಎಂದು ವಿಧಾನಪರಿಷತ್‌ ಸದಸ್ಯ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಗೋಮಧುಸೂದನ್‌ ಬಿಜೆಪಿ ಮುಖಂಡರಿಗೆ ಸಲಹೆ ನೀಡಿದರು. ಕುವೆಂಪು ಕಲಾಮಂದಿರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಾತನಾಡಿ, ಪಕ್ಷದ ಕಾರ್ಯಕ್ರಮದಲ್ಲಿ ಭಾರತಾಂಬೆಗೆ ಜೈಕಾರ ಹೇ ಳು ತ್ತೇ ವೆಂ iುೆ  ವಿನಃ ಯ ಾಮದೇ ನಾಯಕರಿಗೆ ಜೈಕಾರ ಹಾಕುಮದಿಲ್ಲ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಆದರೆ ರಾಜ್ಯದಲ್ಲಿ ಸಂದಿಗ್ಧ ದಿನದಲ್ಲಿದ್ದೇವೆ. ಮಗು ಮತ್ತು ತಾಯಿಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಯಾಮದೇ ಜನಪ್ರತಿನಿಧಿ ಗೆಲುವಿಗೆ ಕಾರ್ಯಕರ್ತರ ಬೆವರಿನ ಹನಿಯ ಶ್ರಮ ಇದೆ. ಚುನಾವಣೆಯಲ್ಲಿ ಗೆಲುಮ ಸಾಧಿಸಿದವರು ಇದನ್ನು ನೆನಪು ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿ, ನಾವೆಲ್ಲಾ ಭಾರತಾಂಬೆಯ ಮಕ್ಕಳು. ಮಹಾತ್ಮಗಾಂಧೀಜಿ ರಾಷ್ಟ್ರಪಿತ ಆಗಲು ಸಾಧ್ಯವಿಲ್ಲ. ರಾಷ್ಟ್ರಪುತ್ರ ಆಗುತ್ತಾರೆ. ಇದನ್ನೇ ಈ ಹಿಂದೆ ಪ್ರತಿಪಾದಿಸಿರುವೆ ಎಂದು ತಿಳಿಸಿದರು. ಪಕ್ಷ ತಾಯಿ ಇದ್ದ ಹಾಗೆ. ಕುರ್ಚಿಗಾಗಿ, ನೋಟಿಗಾಗಿ, ಹೊಟ್ಟೆಪಾಡಿಗಾಗಿ ರಾಜಕಾರಣ ಮಾಡಲು ಬಂದವರಲ್ಲ, ಪಕ್ಷದ ತತ್ವ, ಆದರ್ಶ, ಸಿದ್ಧಾಂತವನ್ನು ನಂಬಿ ಬಹುತೇಕ ಜನರು ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ತಾಯಿ ಚೆನ್ನಗಿದ್ದರೆ ೧೦ ಮಕ್ಕಳನ್ನು ಹೆರುವ ಸಾಮರ್ಥ್ಯ ಹೊಂದಿರು ತ್ತಾಳೆ. ಆದರೆ ರಾಜ್ಯದಲ್ಲಿ ಹೇಳಿಕೊಳ್ಳಲಾಗದ ಸಂಕಷ್ಠವನ್ನು ಅನುಭವಿಸುವಂತಾಗಿದೆ ಎಂದು ನುಡಿದರು. ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಾ ಬಂದ ಪಕ್ಷ ನಮ್ಮದು. ನಾಯಕರುಗಳು ಆದರ್ಶಗಳಿಗೆ ತಕ್ಕ ಹಾಗೆ ನಡೆದುಕೊಳ್ಳುತ್ತಿಲ್ಲ. ಹಾಗಾಗಿ ಈಗ ಕಾರ್ಯಕರ್ತರು ತಲೆತಗ್ಗಿಸು ವಂತಾಗಿದೆ. ಈ ತುಮುಲಕ್ಕೆ ವರಿ ಷರ್ಠ ು ಉತರ್ತ  ಕೊ ಡಬ ೆ ಕಾಗಿದ.ೆ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧ ವಾಗಿರುವ ಬಿಜೆಪಿ ಕಾರ್ಯ ಕರ್ತರು ಯಾಮದೇ ವ್ಯಕ್ತಿಯ ಚೇಲ, ಬಾಲಬುಡುಕ ಹಿಂಬಾ ಲಕರಲ್ಲ. ಹಾಗಾಗಿ ಅವರನ್ನು ದುಡ್ಡುಕೊಟ್ಟು ಕೊಂಡುಕೊಳ್ಳ ಲಾಗದು ಎಂದು ಕೆಲಮ ಮುಖಂಡರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಶ್ರೀಕೃಷ್ಣನ ದಯೆುಯಿಂದ ಅರ್ಜುನ ಮೆರೆಯಲು ಸಾಧ್ಯವಾಯಿತು. ಹಾಗೆಯೆು ಪಕ್ಷ ಶ್ರೀಕೃಷ್ಣ ಪರಮಾತ್ಮ ಇದ್ದಂತೆ ಇದನ್ನು ಬಿಟ್ಟವರಿಗೆ ಉಳಿಗಾಲ ಇಲ್ಲವೆಂಬ ಎಚ್ಚರಿಕೆ ಎಲ್ಲಾ ನಾಯಕರಿಗೆ ಇರಬೇಕಾಗುತ್ತದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿದವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಒಮ್ಮೆ ಅವಲೋಕನ ಮಾಡಿಕೊಳ್ಳುಮದು ಒಳ್ಳೆಯದೆಂದು ಕಿವಿ ಮಾತು ಹೇಳಿದರು. ಯಾಮದೇ ನಾಯಕರಿಗೆ ಮೂಗುಧಾರ ಹಾಕಿ ಹಿಡಿದಿಡುವ ತಾಕತ್ತು ಪಕ್ಷಕ್ಕಿದೆ. ಎತ್ತು ಹೋದ ಹಾಗೆ ಗಾಡಿಯೂ ಹೋಗುತ್ತದೆ, ಆದರೆ ಅದರ ಮೇಲೆ ಕುಳಿತು ಪ್ರಯಾಣಿಸುತ್ತಿರುವವರು ಆ ದಾರಿಯಲ್ಲಿ ಸಾಗಬೇಕೆಂದೇನು ಇಲ್ಲ.

No Comments to “ಕುರ್ಚಿಆಸೆಗೆ ಕಚ್ಚಾಡದಿರಿ-ಪಕ್ಷವನ್ನು ಬಲಿ ಕೊಡದಿರಿ”

add a comment.

Leave a Reply

You must be logged in to post a comment.